ಜಗಳ
ಅಕ್ಕ ತಂಗಿಯರಲ್ಲಿ ಜಗಳ ತಾಯಿ ಇರುವ ತನಕ
ಅಣ್ಣ ತಮ್ಮಂದಿರಲ್ಲಿ ಜಗಳ ತಂದೆ ಸತ್ತ ಬಳಿಕ
ಗಂಡ ಹೆಂಡಿರ ಜಗಳ ಅವರಲ್ಲೊಬ್ಬರು ಹೋಗುವ ತನಕ
ನೆರೆಯವರಲ್ಲಿ ಜಗಳ ಕೆಲಸದಾಕೆ ಒಬ್ಬಳೇ ಆಗಿರುವ ತನಕ
ಬಂಧು ಬಳಗದಲ್ಲಿ ಜಗಳ ಆಸ್ತಿ ಅಂತಸ್ತು ಇರುವ ತನಕ
ಮನಸ್ಸಿಗೂ ಬುದ್ಧಿಗೂ ಜಗಳ ಆತ್ಮಸಾಕ್ಷಿ ಇರುವ ತನಕ
ಬೆಳಕು, ಕತ್ತಲೆಯಂತ್ತಿದ್ದರೆ ಬರುವುದಿಲ್ಲ ಜಗಳ
ಒಬ್ಬರು ಬರುವುದಿಲ್ಲ ಇನ್ನೂಬ್ಬರು ಇರುವ ತನಕ
Comments
Post a Comment