ವಿಚಾರಗಳು

ಎಲ್ಲಿದೆ ಕನ್ನಡಕ
ಸ್ಪಷ್ಟವಿಲ್ಲ ಮಸುಕಾಗಿ ಕಾಣಿಸುತ್ತಿವೆ
ಕದಲಿಸಬೇಡ ಚಿತ್ರಗಳು ಚದುರುತ್ತವೆ

ಸ್ವಚ್ಛ ಮಾಡುವೆ
ಶ್ರವಣ ಯಂತ್ರ ಹಳೆಯದಾಗಿದೆ
ಧೊರಣೆ ಸರಿಮಾಡಿಕೊ ತಪ್ಪದೆ

ಮೆತ್ತಗಿದ್ದರೆ ಸಾಕು
ಹಲ್ಲುಜೋಡು ಸವೆದಿದೆ ನುರಿಸಲು
ಹೊಸ ಭಕ್ಷೆ ಕಠಿಣ ಜೀರ್ಣಿಸಲು

ಕೋಲಿಲ್ಲದೆ ನಡೆಯಲಾರೆ
ಒಮ್ಮೊಮ್ಮೆ ಕೋಲಿದ್ದರೂ ನಡೆಯಲಾರೆ
ಬಲ ಬಂದಂತೆ ಯಾರೊ ಜೊತೆಗಿದ್ದರೆ

ಹೇಗೋ ಎಂತೋ
ಆರಾಮ ದಿಂದ ಇದ್ದೀನಿ ಕಾತರ ಬೇಡ
ಇವು ಬರೀ ವಿಚಾರಗಳು ಗಮನಿಸಬೇಡ

Comments

Popular posts from this blog

ಜಗಳ

ಮರೀಚಿಕೆ

ಸ್ವಾತಂತ್ರ