ಅಕ್ಕ ತಂಗಿಯರಲ್ಲಿ ಜಗಳ ತಾಯಿ ಇರುವ ತನಕ ಅಣ್ಣ ತಮ್ಮಂದಿರಲ್ಲಿ ಜಗಳ ತಂದೆ ಸತ್ತ ಬಳಿಕ ಗಂಡ ಹೆಂಡಿರ ಜಗಳ ಅವರಲ್ಲೊಬ್ಬರು ಹೋಗುವ ತನಕ ನೆರೆಯವರಲ್ಲಿ ಜಗಳ ಕೆಲಸದಾಕೆ ಒಬ್ಬಳೇ ಆಗಿರುವ ತನಕ ಬಂಧು ಬಳಗದಲ್ಲಿ ಜಗಳ ಆಸ್ತಿ ಅಂತಸ್ತು ಇರುವ ತನಕ ಮನಸ್ಸಿಗೂ ಬುದ್ಧಿಗೂ ಜಗಳ ಆತ್ಮಸಾಕ್ಷಿ ಇರುವ ತನಕ ಬೆಳಕು, ಕತ್ತಲೆಯಂತ್ತಿದ್ದರೆ ಬರುವುದಿಲ್ಲ ಜಗಳ ಒಬ್ಬರು ಬರುವುದಿಲ್ಲ ಇನ್ನೂಬ್ಬರು ಇರುವ ತನಕ
ಸ್ವಾತಂತ್ರದ ಸ್ವಾದವನು ಸವಿಯುವ ಸುಯೋಗವಿಲ್ಲ ಕಾಲದ ಕೂಪದಲಿ ಕಾಲಿಟ್ಟ ಮೇಲೆ ನರಳುವುದು ಸಲ್ಲ ತುತ್ತಾದೆ ತ್ವರಿತ ಸ್ವತ್ತಿಗೆ, ಸ್ವಂತ ಅನುರಾಗವ ನೆನೆಸಲಾರೆ ಕ್ಶಣಮಾತ್ರ ಕಂಕುಳ ತೊಗಲ ಸಾಂಚಿಯ ಅಗಲಿರಲಾರೆ ಕೀಲಿ, ಚಶ್ಮ, ನಗದು, ನಗಲುಗಳ ರಕ್ಷಣೆಯ ಹೊಣೆಯಲಿ ವಸ್ತು ಏನೋ ಮರೆತಂತೆ ಎಲ್ಲೋ ಬಿದ್ದಂತೆ ಭಾವದಲಿ ಅಧಿಕಾರದಿ ಕಟ್ಟಿಹಿಡಿಯಲು ಅವರಿವರ ಸಂಬಂಧಗಳ ಸೌಜನ್ಯ ಬಿಟ್ಟು ಕೆಡಿಸಿ ಮನಗಳ ತಾರುಗಳ ಶ್ರುತಿಮೇಳ ಬಾರದು ಸ್ವಾತಂತ್ರ ಕಾಲದ ಗುಲಾಮಗಿರಿಗೆ ತುತ್ತಾದರೆ ತ್ಯೆಜಿಸಿ ಪಂದ್ಯ, ಆಂತರಿಕ ಮೌಲ್ಯ ಮಾಪನ ಮಾಡದಿರೆ
Comments
Post a Comment