ಜೀವನದ ಆಟ
ಆಟವೊಂದು ಶುರು
ಆಯ್ಕೆಗಿಲ್ಲ ದಾವೇದಾರರು
ತೀರ್ಪುಗಾರ ನಿಶ್ಚಿತ
ಇತ್ಯರ್ಥ ಖಚಿತ
ಒಬ್ಬೋಂಟಿ ಆಟಗಾರ
ವಹಿಸುವರಾರ ಪರ
ನಿಯಮಗಳಿಲ್ಲ ಎರಡು
ಗೆಲ್ಲಲಾಗದಿದ್ದರೆ ಹೋರಡು
ತಂತ್ರವ ಹೂಡು
ನೀಯತ್ತಿನಿಂದ ಆಡು
ಕುತಂತಕ್ಕೆ ಬಹಿಶ್ಕಾರ
ದೂಶಿಸಬೇಡ ಯಾರ
ಸಂಯಮವಿರಲಿ ಗೆಳೆಯ
ಮಂತ್ರವಿದು ನಿಸ್ಸಂಶಯ
ತನ್ನಷ್ಟಕ್ಕೆ ಶುರುವಾಗುವದು
ಹಂತದಲ್ಲಿ ಕೊನೆಯಾಗುವದು
Comments
Post a Comment