Posts

ನೌಕರಿ

ಕ್ರಮವಾಗಿ ಎದ್ದು ನೌಕರಿಗೆ  ಹೋಗುವೆ ಬೆಳ ಬೆಳಗ್ಗೆ ಮುಂಜಾನೆ ಜಾವಾ ಹತಾಶೆ ಇದ್ದರೂ ಆಡುವೆ ಸೋಗು ದಿನೇ ದಿನಾಲು ಪ್ರತಿನಿತ್ಯ ಅದೇ ದೈನಂದಿನ ಗೋಜಿಗೆ ದೂರದೇ ಹೊಂದಿ ಮಾತಿಗೆ ಮಾತು ಪ್ರಸಂಗ ಇದ್ದಂತೆ ಸಂಚಾರ ಅಸಾಮಾನ್ಯ ಉದ್ಯೋಗ ದುರ್ಭರ ಬಿಟ್ಟು ಬಿಡುವೆ, ಕನವರಿಸಿ ಸದಾ ಹೋಲಿಸಿ ನೋಡು ಜೀವನವೇ ನೌಕರಿ ಹೋಗಿ ಬರುವ ಹಾದಿಯ ಯಾತ್ರಿಕ ಆತುರದ ಪಯಣವಲ್ಲ ಆನಂದಿಸು ಪ್ರಕ್ರಿಯೆ ಬೇನೆ ಬವಣೆ ಅಡಚನಗಳಿಲ್ಲಿ ಸಹಜ

ಸ್ವಾತಂತ್ರ

ಸ್ವಾತಂತ್ರದ ಸ್ವಾದವನು ಸವಿಯುವ ಸುಯೋಗವಿಲ್ಲ ಕಾಲದ ಕೂಪದಲಿ ಕಾಲಿಟ್ಟ ಮೇಲೆ ನರಳುವುದು ಸಲ್ಲ ತುತ್ತಾದೆ ತ್ವರಿತ ಸ್ವತ್ತಿಗೆ, ಸ್ವಂತ ಅನುರಾಗವ ನೆನೆಸಲಾರೆ   ಕ್ಶಣಮಾತ್ರ ಕಂಕುಳ ತೊಗಲ ಸಾಂಚಿಯ ಅಗಲಿರಲಾರೆ ಕೀಲಿ, ಚಶ್ಮ, ನಗದು, ನಗಲುಗಳ ರಕ್ಷಣೆಯ ಹೊಣೆಯಲಿ ವಸ್ತು ಏನೋ ಮರೆತಂತೆ ಎಲ್ಲೋ ಬಿದ್ದಂತೆ ಭಾವದಲಿ ಅಧಿಕಾರದಿ ಕಟ್ಟಿಹಿಡಿಯಲು ಅವರಿವರ ಸಂಬಂಧಗಳ     ಸೌಜನ್ಯ ಬಿಟ್ಟು ಕೆಡಿಸಿ ಮನಗಳ ತಾರುಗಳ ಶ್ರುತಿಮೇಳ ಬಾರದು ಸ್ವಾತಂತ್ರ ಕಾಲದ ಗುಲಾಮಗಿರಿಗೆ ತುತ್ತಾದರೆ ತ್ಯೆಜಿಸಿ ಪಂದ್ಯ, ಆಂತರಿಕ ಮೌಲ್ಯ ಮಾಪನ ಮಾಡದಿರೆ  

ಎಲೆಕ್ಷನ್ ಚುಟುಕ

ಎಲೆಕ್ಷನ್ ಚುಟುಕ ದಾವೇದಾರನೊಬ್ಬ ಹಗಲು ರಾತ್ರಿ ಜನರ ನಡುವೆ ತಿರುಗಿ ಕೆಲಸ ಮಾಡುವೆನೆಂದು ಆಶ್ವಾಸನೆ ನೀಡಿದ ವೋಟಿಗಾಗಿ ಎಲೆಕ್ಷನ್ ಗೆದ್ದ ಮೇಲೆ ಬುಲೆಟ್ ಪ್ರೂಫ್ ವೇದಿಕೆಯಿಂದಲೇ ಭಾಷಣ ಮಾಡಿದ “ನಮ್ಮ ಬಂಧ ವಿಶ್ವಾಸದ ಬಂಧ ಎಂದಿಗೂ ಮುರಿಯದಿರಲಿ” —————————————————————————- ರಾಹುಲಪ್ಪ ರಾಹುಲಪ್ಪ ಏನ್ ಬೇಕು ತಿಂಡಿ ಬೇಕು ತೀರ್ಥ ಬೇಕು ವೋಟು ಬೇಕು ರಾಹುಲಪ್ಪ ನಿನಗೆ ವೋಟು ಏಕೆ ಬೇಕು ಥೈಲ್ಯಾಂಡ್ ಹೋಗಿ ಅಲ್ಲಿ ಮನೆಯ ಕಾಯಬೇಕು ————————————————————————— ಕೃಷ್ಣಾ ಎನಬಾರದೇ ನೀ ಕೃಷ್ಣಾ ಎನಬಾರದೇ ವಿಶ್ವೇಶ್ವರಯ್ಯನ ನೆನೆದರೆ ಕಷ್ಟ ಒಂದಿಷ್ಟಿಲ್ಲ …… ರಾಹುಲಪ್ಪ….. ರಾಹುಲಪ್ಪ…… ಸಿದ್ದರಾಮಯ್ಯ ಪರಸ್ಥಿಥಿ ಮೂಕ ಹಕ್ಕಿಯು ಹಾಡುತಿದೆ ಭಾಶೆಗೂ ಸಿಲುಕದ ಭಾವ ಗೀತೆ ಹಾರಿ ಹಾರಿ ಹಾಡುತಿದೆ ————————————————————————— ದಾರಿ ಕಾಣದಾಗಿದೆ ರಾಹುಲ್ ಗಾಂಧಿಯೆ ಪಾರ್ಟಿ ಬಿಟ್ಟು ಹೋಗಿ ಬಾ ಸೋನಿಯಾ ತನಯನೆ …… ————————————————————————-

ಜಗಳ

ಅಕ್ಕ ತಂಗಿಯರಲ್ಲಿ  ಜಗಳ ತಾಯಿ ಇರುವ ತನಕ ಅಣ್ಣ ತಮ್ಮಂದಿರಲ್ಲಿ ಜಗಳ ತಂದೆ ಸತ್ತ ಬಳಿಕ ಗಂಡ ಹೆಂಡಿರ ಜಗಳ ಅವರಲ್ಲೊಬ್ಬರು ಹೋಗುವ ತನಕ ನೆರೆಯವರಲ್ಲಿ ಜಗಳ ಕೆಲಸದಾಕೆ ಒಬ್ಬಳೇ ಆಗಿರುವ ತನಕ ಬಂಧು ಬಳಗದಲ್ಲಿ ಜಗಳ ಆಸ್ತಿ ಅಂತಸ್ತು  ಇರುವ ತನಕ ಮನಸ್ಸಿಗೂ ಬುದ್ಧಿಗೂ ಜಗಳ ಆತ್ಮಸಾಕ್ಷಿ ಇರುವ ತನಕ ಬೆಳಕು, ಕತ್ತಲೆಯಂತ್ತಿದ್ದರೆ ಬರುವುದಿಲ್ಲ  ಜಗಳ ಒಬ್ಬರು ಬರುವುದಿಲ್ಲ ಇನ್ನೂಬ್ಬರು  ಇರುವ ತನಕ

ವಿಚಾರಗಳು

ಎಲ್ಲಿದೆ ಕನ್ನಡಕ ಸ್ಪಷ್ಟವಿಲ್ಲ ಮಸುಕಾಗಿ ಕಾಣಿಸುತ್ತಿವೆ ಕದಲಿಸಬೇಡ ಚಿತ್ರಗಳು ಚದುರುತ್ತವೆ ಸ್ವಚ್ಛ ಮಾಡುವೆ ಶ್ರವಣ ಯಂತ್ರ ಹಳೆಯದಾಗಿದೆ ಧೊರಣೆ ಸರಿಮಾಡಿಕೊ ತಪ್ಪದೆ ಮೆತ್ತಗಿದ್ದರೆ ಸಾಕು ಹಲ್ಲುಜೋಡು ಸವೆದಿದೆ ನುರಿಸಲು ಹೊಸ ಭಕ್ಷೆ ಕಠಿಣ ಜೀರ್ಣಿಸಲು ಕೋಲಿಲ್ಲದೆ ನಡೆಯಲಾರೆ ಒಮ್ಮೊಮ್ಮೆ ಕೋಲಿದ್ದರೂ ನಡೆಯಲಾರೆ ಬಲ ಬಂದಂತೆ ಯಾರೊ ಜೊತೆಗಿದ್ದರೆ ಹೇಗೋ ಎಂತೋ ಆರಾಮ ದಿಂದ ಇದ್ದೀನಿ ಕಾತರ ಬೇಡ ಇವು ಬರೀ ವಿಚಾರಗಳು ಗಮನಿಸಬೇಡ

ಮರೀಚಿಕೆ

ಬಾಳಿನ ಗುರಿಯೆಂಬುದೊಂದು ಮರೀಚಿಕೆಈ ದಿನದಂದು ಇರುವುದು ಒಂದೇ ವೇದಿಕೆ ಅಂಜದೆ ಎದುರಿಸಿದರೆ ನಿನ್ನ ಜೀವನಕ್ಕದೇ ಕಾರಣ ಹೆದರಿದರೆ ಜೀವಂತವಿದ್ದರೂ ಅದು ನಿನ್ನ ಮರಣ

ಜೀವನದ ಆಟ

ಆಟವೊಂದು ಶುರು ಆಯ್ಕೆಗಿಲ್ಲ ದಾವೇದಾರರು ತೀರ್ಪುಗಾರ ನಿಶ್ಚಿತ ಇತ್ಯರ್ಥ ಖಚಿತ ಒಬ್ಬೋಂಟಿ ಆಟಗಾರ ವಹಿಸುವರಾರ ಪರ ನಿಯಮಗಳಿಲ್ಲ ಎರಡು ಗೆಲ್ಲಲಾಗದಿದ್ದರೆ ಹೋರಡು ತಂತ್ರವ ಹೂಡು ನೀಯತ್ತಿನಿಂದ ಆಡು ಕುತಂತಕ್ಕೆ ಬಹಿಶ್ಕಾರ ದೂಶಿಸಬೇಡ ಯಾರ ಸಂಯಮವಿರಲಿ ಗೆಳೆಯ ಮಂತ್ರವಿದು ನಿಸ್ಸಂಶಯ ತನ್ನಷ್ಟಕ್ಕೆ ಶುರುವಾಗುವದು ಹಂತದಲ್ಲಿ ಕೊನೆಯಾಗುವದು