ನೌಕರಿ

ಕ್ರಮವಾಗಿ ಎದ್ದು
ನೌಕರಿಗೆ  ಹೋಗುವೆ
ಬೆಳ ಬೆಳಗ್ಗೆ ಮುಂಜಾನೆ ಜಾವಾ

ಹತಾಶೆ ಇದ್ದರೂ
ಆಡುವೆ ಸೋಗು
ದಿನೇ ದಿನಾಲು ಪ್ರತಿನಿತ್ಯ ಅದೇ

ದೈನಂದಿನ ಗೋಜಿಗೆ
ದೂರದೇ ಹೊಂದಿ
ಮಾತಿಗೆ ಮಾತು ಪ್ರಸಂಗ ಇದ್ದಂತೆ

ಸಂಚಾರ ಅಸಾಮಾನ್ಯ
ಉದ್ಯೋಗ ದುರ್ಭರ
ಬಿಟ್ಟು ಬಿಡುವೆ, ಕನವರಿಸಿ ಸದಾ

ಹೋಲಿಸಿ ನೋಡು
ಜೀವನವೇ ನೌಕರಿ
ಹೋಗಿ ಬರುವ ಹಾದಿಯ ಯಾತ್ರಿಕ

ಆತುರದ ಪಯಣವಲ್ಲ
ಆನಂದಿಸು ಪ್ರಕ್ರಿಯೆ
ಬೇನೆ ಬವಣೆ ಅಡಚನಗಳಿಲ್ಲಿ ಸಹಜ


Comments

Popular posts from this blog

ಜಗಳ

ಮರೀಚಿಕೆ

ಸ್ವಾತಂತ್ರ